ಮಗಳ ಮುಖವಾಡ ಕಳಚಿದ ದೊಡ್ಡಪ್ಪ
ಘಟನೆ ಬಗ್ಗೆ ಅನಿಲ್ ಅಣ್ಣನ ಮಾತು : ರೀಸೆಂಟ್ಆಗಿ ನನ್ ತಮ್ಮನಿಗೆ ನೆನ್ನೆ ಮೊನ್ನೆ ಮಗಳು ಬೆಳ್ಳಾವರಕ್ಕೆ ಬಂದಿದ್ದಾಳೆ ಅನ್ನೋ ವಿಚಾರ ಗೊತ್ತಾಯ್ತು. ಗೊತ್ತಾದಾಗ ಫೋನ್ ಮಾಡಿದ್ದಾನೆ ಮಗಳು ಬನ್ನಿ ಪಪ್ಪ ಅಂತೇಳಿ ಕರೆದಿದ್ದಾಳೆ. ಆ ಖುಷಿಯಲ್ಲಿ ಹೋಗಿದ್ದಾನೆ ಮಗಳು ಅವನು ಹೋಗಿ ಮಾತಾಡಿದಾರೋ ಕಥೆ ಆಡಿದ್ದಾರೋ ಗೊತ್ತಿಲ್ಲ ಸರ್, ಒಟ್ಟನಲ್ಲಿ ಏಕಾ ಏಕೆ ಅವನಿಗೆ ಫಸ್ಟ್ ದೊಣ್ಣೆಯಿಂದ ಕುತ್ತಿಗೆಗೆ ಹೊಡೆದಿದ್ದಾರೆ.ಅನಂತರ ಒಂದ್ ಆರು ಜನ ಅವನ ಮೇಲೆ ಬಿದ್ದು ಚಾಕುವಿನಿಂದ ಹೊಟ್ಟೆಗೆ ಒಂದು ಆರು ಏಳು ಜಾಗಕ್ಕೆ ಚುಚ್ಚಿದ್ದಾರೆ. ನಂತರ ಆಂಬುಲೆನ್ಸ್ ನ್ನ ಅವರೇ ಯಾಕೆ ಕಳಿಸಿದ್ರು ಅನ್ನೋದು ನಮಗೆ ಗೊತ್ತಿಲ್ಲ ಅಥವಾ ಆಂಬುಲೆನ್ಸ್ ಹೋಗಿ ಕರ್ಕೊಂಡು ಬಂತವೋ ನಮಗೆ ಗೊತ್ತಿಲ್ಲ. ಮಗಳು ಅನಿಷಾ ನನಗೆ ಫೋನ್ ಮಾಡ್ತಾಳೆ ನಿನ್ನ ತಮ್ಮನದು ಬಾಡಿ ಕಳಿಸಿದ್ದೀನಿ ಬರ್ತಾ ಐತೆ ಅಲ್ಲಿ ಇಳಿಸಕೊಳ್ಳಿ ಅಂತಾಳೆ.ಅಷ್ಟರಲ್ಲಿ ಕಾಲ್ ಕಟ್ ಆಗುತ್ತೆ ನಾನು ರಿಟರ್ನ್ ಕಾಲ್ ಮಾಡ್ತಿನಿ ಅಷ್ಟೋತ್ತಿಗೆ ನನ್ ನಂಬರ್ ಬ್ಲಾಕ್ಗೆ ಬಿದ್ದಿರುತ್ತೆ.
ನಾನು ರೋಡಿಗೆ ಹೋಗ್ತೀವಿ ಅಷ್ಟರಲ್ಲಿ ಆಂಬುಲೆನ್ಸ್ ನಮ್ಮ ಕಣ್ಣ ಮುಂದೆ ಬರ್ತಾನೆ. ನಿಲ್ಸಿ ನೋಡಿದಾಗ ಅದರೊಳಗೆ ನನ್ನ ತಮ್ಮ ಇರ್ತಾನೆ. ಎಲ್ಲ ಕಡೆ ಇಂಜುರಿ ಆಗಿರುತ್ತೆ ಫುಲ್ ಜೀವ ಇರುತ್ತೆ. ಇಂಜುರಿ ಆಗಿ ಫುಲ್ ಬ್ಲಡ್ ಹೋಗ್ತಾ ಇರುತ್ತೆ ಅದು ನೋಡ್ತೀವಿ. ನಾವು ತಕ್ಷಣ ಬೇಲೂರ ಕರ್ಕೊಂಡು ಹೋದ್ವಿ.ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಅಲ್ಲಿಂದ ಹಾಸನ್ ಗೆ ಹೋದ್ವಿ ಅಲ್ಲಿ ಆಗಲ್ಲ ಅಂದ್ರು. ನಂತರ ಮಂಗಳೂರು ಕರ್ಕೊಂಡು ಹೋದ್ವಿ ರಾತ್ರಿ ಹೋಗೋತ್ತಿಗೆ ಎರಡು ಗಂಟೆ ಆಗಿತ್ತು. ಅಲ್ಲೂ ಎಲ್ಲ ಟ್ರೀಟ್ಮೆಂಟ್ ಎಲ್ಲ ಚೆನ್ನಾಗಿ ಮಾಡಿದ್ರು, ಇದೆಲ್ಲ ಆಗಿದ್ದು ಸಂಕ್ರಾಂತಿ 15ನೇ ತಾರೀಕು.
ಮಂಗಳೂರು ಹಾಸ್ಪಿಟಲ್ ನಲ್ಲೂ ಚೆನ್ನಾಗಿ ಟ್ರೀಟ್ಮೆಂಟ್ ಎಲ್ಲ ಕೊಟ್ರು. ಅವ್ರು ಹೇಳಿದ್ರು ಇದು ಲಿವರ್ ಕಟ್ ಆಗಿದೆ ಯಾವುದೇ ಕಾರಣಕ್ಕೂ ಆಗಲ್ಲ ಆದರೆ ನಮ್ಮ ಪ್ರಯತ್ನ ನಾವು ಮಾಡಿದ್ದೇವೆ ಎಂದು.ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ನನ್ ತಮ್ಮನ ಪ್ರಾಣ ಉಳಿಸಿಕೊಳ್ಳಲು ಆಗಲಿಲ್ಲ.ಇನ್ನೂ ಆರೋಪದಲ್ಲಿ ಆರು ಜನರ ಕೈವಾಡ ಇದೆ ಅದರಲ್ಲಿ ರಾಜೇಶ, ರಿತೀಶ, ಹನೀಶ, ಮಣಿ ಹಾಗೂ ಇನ್ನೊಂದೆರಡು ಜನ ಲೇಡೀಸ್ ಸೇರಿದ್ದಾರೆ.ಈ ಸಂಭಂಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.